...

6 views

ನೀನೇ ರಾಜಕುಮಾರ
ನೀನೇ ರಾಜಕುಮಾರ

ನಗುಮೊಗದ ಸರದಾರ
ಸ್ಪೂರ್ತಿ ನೀಡುವ ಮಂದಾರ
ವಿನಯತೆಯುಳ್ಳ ಸಲಹೆಗಾರ
ಎಂದಿಗೂ ಮರೆಯಲಾಗದ ಬಂಗಾರ

ಅಪ್ಪಟ ಕನ್ನಡಿಗ, ಅರಸನಂತೆ‌ ಮೆರೆಯದೆ
ಸಾಧನೆಯನ್ನು ಮಾಡುತಲೇ ಬಂದಿರಿ
ಸಾಧಕರನ್ನು ಗುರುತಿಸಿ, ದೀನರಿಗೆ
ಹೊಸ ಚೈತನ್ಯವನ್ನು ತುಂಬಿದಿರಿ

ಕೈಕುಲುಕಿ, ನಗೆ ಬೀರಿದಿರಿ
ಶುಭವಿದಾಯ‌ವನ್ನು ಹೇಳಿದಿರಿ..
ಮರೆಯಾದ ಮಾಣಿಕ್ಯ, ಜನಮಾಸನದಲ್ಲಿ
ಎಂದಿಗೂ ಘಮಿಸುವ ಶ್ರೀಗಂಧವಾದಿರಿ..

ಕ್ಷಣಿಕ ಜೀವನ ಎಂದು ಅರಿಯಲು
ನಿಮ್ಮ‌ ನಿರ್ಗಮನ ಆಗಬೇಕಿತ್ತೆ??
ಯುವಕರಲ್ಲಿ ಹುಮ್ಮಸ್ಸು ತುಂಬಲು
ನೀವಿನ್ನಷ್ಟು ವರುಷ ಇರಬಾರದಿತ್ತೆ?? 😞

- ಸಿಂಧು ಭಾರ್ಗವ ಬೆಂಗಳೂರು

(೨)
ಉಪಚಾರ

ತಾನು ಸಹಾಯ ಮಾಡಿದ್ದು
ಯಾರಿಗೂ ತಿಳಿಯಬಾರದು
ಎಂದು ಬಯಸಿದವರು
ಸಾಧಕರ ಮನೆಗೆ ಕರೆಸಿ
ಉಪಚರಿಸಿ ಸತ್ಕರಿಸಿದವರು.
ಅಪ್ಪಟ ಅಪ್ಪು.

(೩)
ಪುನೀತವಾಯ್ತು

ರಾಜಕೀಯಕ್ಕೆ
ಬಾರದೇ
ಹೋದರೂ
ತಾನೇ ರಾಜನಾಗಿ
ದೀ‌ನರಿಗೆ
ಸಹಾಯಹಸ್ತ ಚಾಚಿ
ಮೊಗದಲಿ
ನಗುಮೂಡಿಸಿ
ಹೊರಟುಹೋದರು..

ನೀನೇ ರಾಜಕುಮಾರ.
ಪುನೀತವಾಯ್ತು ಕರುನಾಡು!!

(೪) ವಿನಯತೆ

ವಿನಯತೆಯ
ಸಾಕಾರಮೂರ್ತಿ
ಹಿರಿಯರಿಗೆ ಗೌರವ
ಕಿರಿಯರಿಗೆ ಪ್ರೀತಿ
ಹಂಚಿದಾತ!
ಸರ್ವರಿಗೂ
ಸಮಾನ ಸ್ಥಾನವನ್ನು
ನೀಡಿ ಹೃದಯದಲ್ಲಿ
ಜಾಗ ಪಡೆದವನೀತ..

(ಅವರೇ ಪುನೀತ ರಾಜಕುಮಾರ್..)

© Writer Sindhu Bhargava