...

11 views

ಕವನ : ಕನ್ನಡಿಯನ್ನೊಮ್ಮೆ ನೋಡು
ಕನ್ನಡಿಯನ್ನೊಮ್ಮೆ ನೋಡು

ಕೋಪವೇಕೆ ಮಾಡುತೀಯಾ
ಸಿಡುಕು ಮೂತಿ ‌ಸಿದ್ದನಂತೆ
ನಗುವ ತೋರಬಾರದೇ
ಅರಳುಮಲ್ಲಿಗೆಯಂತೆ

ಕನ್ನಡಿ ಎದುರು‌ ನಿಂತು
ನಿನ್ನ ಮೊಗವ ನೀನೇ ನೋಡು
ಬಿಗಿಹಿಡಿದ ಹಣೆಯಲ್ಲಿನ
ಹುಬ್ಬುಗಳ ಸಡಿಲಿಸಿ ನೋಡು

ತುಟಿಯಂಚಿನಲಿ ‌ನಗುವಿರಲಿ
ಕೆನ್ನೆಯಲಿ‌ ಕಾಂತಿ ಬರಲಿ
ಕಣ್ಣುಗಳು ಮಾತನಾಡಲಿ
ಪ್ರೀತಿಯಿಂದ ಹಾಡು ಹೊಮ್ಮಲಿ

ಪ್ರೀತಿಸುವುದು  ಸುಲಭ
ಹಂಚಿದರೆ ಹೆಚ್ಚುವುದು
ದ್ವೇಷಿಸಿದರೆ ಕಠಿಣ
ಹಂಚಿದರೆ ಬೆಂಕಿ ಬೀಳುವುದು

ಕಡಲ ನೀರು ಉಪ್ಪಾದರೂ
ಉಪಯೋಗವಿದೆಯದರ
ನಿನ್ನ ಕೋಪಕೆ ಕಾರಣ ಹುಡುಕಿ
ಶಾಂತಗೊಳ್ಳಲಿ ಮನಮಂದಿರ..

ಭೋರ್ಗರೆವ ಅಲೆಗಳು
ಬಂಡೆಗಳಿಗೆ ಅಪ್ಪಳಿಸಿದಂತೆ
ನಿನ್ನವರ ಮೇಲೆ ನೀ ಎಗರಿದರೆ
ಮುದುಡಿ ಹೋಗುವುದು ಜೀವನವಂತೆ..

ನಿನಗೆ ನೀನೆ ಶತ್ರುವೋ /ಮಿತ್ರನೋ?
ಕನ್ನಡಿಯನೊಮ್ಮೆ ನೋಡು
ನಿನ್ನವರ ವಿಶ್ವಾಸವ ಪಡೆಯಲು
ಹೃದಯದಲ್ಲಿ ಹೂವರಳಿಸು...

ಸಿಂಧು ಭಾರ್ಗವ ಬೆಂಗಳೂರು

..

© Writer Sindhu Bhargava