ಜಡೆಕವನ
ಪದವಿರದ ಮೌನ ಕವನದ ಸಾಲುಗಳು ನೀನಾದೆ
ನೀನಾದೆ ನನ್ನೆದೆಯ ವೇದನೆಯ ಕವನಕೆ ಕಾರಣ
ಕಾರಣವಿಲ್ಲದೆ ನೀನೇಕೆ ಮೌನಿಯಾದೆ ನನ್ನೊಲವೆ
ನನ್ನೊಲವ ನೀನರಿಯದೆ ಮೂಕ ರಾಗವ ಹಾಡಿದೆ
ಹಾಡೊಂದ ಗುನುಗುವ ಸಮಯ ಪದಗಳ ಮರೆತೆ
ಮರೆತ ಮನದಿ ಸಾಲುಗಳಾಗಿ ಅವಿತು ಕವನವಾದೆ
ಕವನಕೆ ರಾಗ ಸಂಯೋಜಿಸದೆ ಸಂಬಂಧ ತೊರೆದೆ
ತೊರೆದು ಹೋಗುವ ವೇಳೆಯಲಿ ನನ್ನೇಕೆ ದೂರಿದೆ
ದೂರುತ ಹೃದಯಕಿಂದು ಗಾಯ...
ನೀನಾದೆ ನನ್ನೆದೆಯ ವೇದನೆಯ ಕವನಕೆ ಕಾರಣ
ಕಾರಣವಿಲ್ಲದೆ ನೀನೇಕೆ ಮೌನಿಯಾದೆ ನನ್ನೊಲವೆ
ನನ್ನೊಲವ ನೀನರಿಯದೆ ಮೂಕ ರಾಗವ ಹಾಡಿದೆ
ಹಾಡೊಂದ ಗುನುಗುವ ಸಮಯ ಪದಗಳ ಮರೆತೆ
ಮರೆತ ಮನದಿ ಸಾಲುಗಳಾಗಿ ಅವಿತು ಕವನವಾದೆ
ಕವನಕೆ ರಾಗ ಸಂಯೋಜಿಸದೆ ಸಂಬಂಧ ತೊರೆದೆ
ತೊರೆದು ಹೋಗುವ ವೇಳೆಯಲಿ ನನ್ನೇಕೆ ದೂರಿದೆ
ದೂರುತ ಹೃದಯಕಿಂದು ಗಾಯ...